ರೇವತಿ
ಮೀನರಾಶಿಯ (ಪಿಸೀಸ್) ಸಾಮಾನ್ಯ ತಾರೆ (ಜ-ಪಿಸೀಸ್). ಗೋಚರ ಉಜ್ವಲತಾಂಕ 4.45; ನಿರಪೇಕ್ಷ ಉಜ್ವಲತಾಂಕ +1.4; ಕ್ರಾಂತಿ (ಘಂಟಾವೃತ್ತಾಂಶ ಅಥವಾ ಖಾಗೋಳಿಕ ಅಕ್ಷಾಂಶ, ಡೆಕ್ಲಿನೇಶನ್) 70 46' 17' ಉತ್ತರ; ವಿಷುವದಂಶ (ಖಾಗೋಳಿಕ ರೇಖಾಂಶ, ರೈಟ್ ಅಸೆನ್ಷನ್) 1h 1' 48' ; ಸೂರ್ಯನಿಂದ ದೂರ 140 ಜ್ಯೋತಿರ್ವರ್ಷ; ರೋಹಿತ ಪ್ರರೂಪ ಏ0. ಭಾರತೀಯ ಜ್ಯೋತಿಶ್ಶಾಸ್ತ್ರದಲ್ಲಿಯೂ ಪುರಾಣಗಳಲ್ಲಿಯೂ ಉಲ್ಲೇಖ ಉಂಟು. ಚಂದ್ರನ 27 ನಕ್ಷತ್ರಗಳ ಪೈಕಿ ಕೊನೆಯದು.		

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ